ಕಾಡಸಿದ್ಧೇಶ 1

ಇಷ್ಟಲಿಂಗಶತಕವನ್ನು ಬರೆದ ವೀರಶೈವಕವಿ, ಹದಿನೆಂಟನೆಯ ಶತಮಾನದÀವ. ಇವನಲ್ಲದೆ ವಚನಕಾರ ಕಾಡಸಿದ್ಧೇಶನೊಬ್ಬನಿದ್ದಾನೆ. (ನೋಡಿ ಕಾಡಸಿದ್ಧೇಶ2)  ಇಷ್ಟಲಿಂಗಶತಕದಲ್ಲಿ ವೃತ್ತಛಂದಸ್ಸಿನ 111 ಪದ್ಯಗಳಿವೆ. ಪರ್ವತೇಶನ ಅಂಗೈಯೊಳಗೆದಾತ ಭಕ್ತರಣುಗ ಕಾಡಸಿದ್ಧೇಶ ಎಂದು ಹೇಳಿಕೊಂಡಿರುವುದರಿಂದ ಈತನ ಗುರು ಪರ್ವತೇಶ ಎಂದು ತಿಳಿದುಬಂದಿದೆ. ಚತುರಾಚಾರ್ಯಪುರಾಣವನ್ನು ಬರೆದ ಪರ್ವತೇಶನೂ (ಕ್ರಿ.ಶ1698) ಈತನೂ ಒಬ್ಬರೇ ಆದ ಪಕ್ಷದಲ್ಲಿ ಈತನ ಕಾಲ ಕ್ರಿ.ಶ. 1725 ಎಂದು ಊಹಿಸಬಹುದು. ಇಷ್ಟಲಿಂಗಶತಕದಲ್ಲಿನ ಪ್ರತಿಯೊಂದು ಪದ್ಯವೂ ಶ್ರೀಇಷ್ಟಲಿಂಗೇಶ್ವರಾ ಎಂದು ಮುಗಿಯುತ್ತದೆ. ಶಿವಾಧಿಕೃವನ್ನು ಹೆಚ್ಚಾಗಿ ವರ್ಣಿಸಿರುವುದರಿಂದ ಈ ಗ್ರಂಥಕ್ಕೆ ಶಿವಾಧಿಕ್ಯ ಎಂಬ ಹೆಸರೂ ಉಂಟು. ಅದರ ಒಂದು ಪದ; 

ಜಗಮಂ ರಕ್ಷಿಪ ದೇವ ತಾನೆ ಗುರುವಿಂ ಹಸ್ತಾಬ್ಜಲ್ಲೊಪ್ಪಿರಲ್

ಬಗೆಯಿಂ ಪೂಜಿಸಿ ಮುಕ್ತರಾಗಿ ಭವಪಾರಾವಾರಮಂ ದಾಂಟದೇ|

ನಗೆಗೀಡಾಗಿ ಕುಜಾತಿಗೂಡಿ ಕುಣಿದಾಡೀ ಪಾಡಿ ಭೂತಂಗಳಂ

ಮಿಗಿಲಾರಾಧಿಸಿ ಬೀವ್ವಿರೇಕೆ ಭವದೊಳ್ ಶ್ರೀಇಷ್ಟಲಿಂಗೇಶ್ವರಾ||   

(ಎಂ.ಜಿ.ಎನ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ